ಸಂಘ ಪರಿವಾರ ( "ಆರ್‌ಎಸ್‌ಎಸ್ ಕುಟುಂಬ" ) ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹುಟ್ಟುಹಾಕಿದ ಹಿಂದುತ್ವ ಸಂಘಟನೆಗಳ ಕುಟುಂಬವನ್ನು ಸೂಚಿಸುತ್ತದೆ. ಇವುಗಳಲ್ಲಿ ರಾಜಕೀಯ ಅಂಗವಾದ ಭಾರತೀಯ ಜನತಾ ಪಕ್ಷ, ಧಾರ್ಮಿಕ ಅಂಗ ವಿಶ್ವ ಹಿಂದೂ ಪರಿಷತ್, ವಿದ್ಯಾರ್ಥಿಗಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ ಬಿ ವಿ ಪಿ), ಧಾರ್ಮಿಕ ಸಂಘಟನೆ ಬಜರಂಗದಳ ಮತ್ತು ಕಾರ್ಮಿಕರ ಒಕ್ಕೂಟ ಭಾರತೀಯ ಕಿಸಾನ್ ಸಂಘ ಪ್ರಮುಖವಾದವು. ಸಂಘಪರಿವಾರವು ಭಾರತದ ಹಿಂದೂ ರಾಷ್ಟ್ರೀಯತಾವಾದವನ್ನು ಪ್ರತಿನಿಧಿಸುತ್ತದೆ.ಸಂಘ ಪರಿವಾರದ ಸದಸ್ಯರು ಅಥವಾ ಅದರ ಸಿದ್ಧಾಂತದ ಬೆಂಬಲಿಗರನ್ನು ಸಾಮಾನ್ಯವಾಗಿ ಸಂಘಿಗಳು ಎಂದು ಕರೆಯಲಾಗುತ್ತದೆ. == ಇತಿಹಾಸ == ೧೯೬೦ ರ ದಶಕದಲ್ಲಿ, ಆರ್‌ಎಸ್‌ಎಸ್‌ನ ಸ್ವಯಂಸೇವಕರು ಭಾರತದಲ್ಲಿನ ವಿವಿಧ ಸಾಮಾಜಿಕ ಮತ್ತು ರಾಜಕೀಯ ಆಂದೋಲನಗಳಿಗೆ ಭಾಗವಹಿಸಿದರು, ಅವುಗಳಲ್ಲಿ ಪ್ರಮುಖವದವು, ಪ್ರಖ್ಯಾತ ಗಾಂಧಿವಾದಿ ವಿನೋಭಾ ಭಾವೆ ನೇತೃತ್ವದ ಭೂಸುಧಾರಣಾ ಚಳವಳಿ - ಭೂದಾನ, ಮತ್ತೊಂದು ಸರ್ವೋದಯ ಇನ್ನೊಬ್ಬ ಗಾಂಧಿವಾದಿ ಜಯಪ್ರಕಾಶ್ ನಾರಾಯಣ್ ನೇತೃತ್ವದ ಚಳುವಳಿ. ಆರ್‌ಎಸ್‌ಎಸ್ ಟ್ರೇಡ್ ಯೂನಿಯನ್, ಭಾರತೀಯ ಮಜ್ದೂರ್ ಸಂಘ , ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸೇವಾ ಭಾರತಿ, ಲೋಕ ಭಾರತಿ ಮತ್ತು ದೀನದಯಾಳ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಂತಹ ಇತರ ಸಂಸ್ಥೆಗಳ ರಚನೆಯನ್ನು ಹುಟ್ಟುಹಾಕಿದೆ. ಆರೆಸ್ಸೆಸ್ ಸ್ವಯಂಸೇವಕರು ಪ್ರಾರಂಭಿಸಿದ ಮತ್ತು ಬೆಂಬಲಿಸಿದ ಈ ಸಂಘಟನೆಗಳು ಒಟ್ಟಾಗಿ ಸಂಘಪರಿವಾರ ಎಂದು ಕರೆಯಲ್ಪಡುತ್ತವೆ. ಮುಂದಿನ ದಶಕಗಳಲ್ಲಿ ಭಾರತದ ಸಾಮಾಜಿಕ ಮತ್ತು ರಾಜಕೀಯದಲ್ಲಿ ಸಂಘ ಪರಿವಾರವು ನಿಶ್ತಿವಾದ ಹಾಗು ಸ್ಥಿರವಾದ ಪ್ರಭಾವವನ್ನು ಬೀರುತ್ತಿದೆ. == ಸಿದ್ಧಾಂತ == === ಅರ್ಥಶಾಸ್ತ್ರ === ಬಿಜೆಪಿ ಸರ್ಕಾರಗಳು ಉದ್ಯಮ ಸ್ನೇಹಿಯಾಗಿವೆ ಎಂದು ಕಂಡುಬಂದರೂ, ಭಾರತೀಯ ಮಜ್ದೂರ್ ಸಂಘ (ಬಿ ಎಮ್ ಎಸ್) ನಂತಹ ಸಂಘ ಪರಿವಾರದ ಘಟಕಗಳ ಅಭಿಪ್ರಾಯ ಕಾರ್ಮಿಕ ಸ್ನೆಹಿ ಎಡಪಂಥೀಯ ನಿಲುವುಗಳನ್ನು ಹೂಂದಿವೆ. ಬಿಜೆಪಿ ಆರಂಭದ ದಿನಗಳಲ್ಲಿ 'ಸ್ವದೇಶಿ' (ಸ್ವಾವಲಂಬನೆ) ಯನ್ನು ಪ್ರತಿಪಾದಿಸುತ್ತಿತ್ತು. ಸಂಘಪರಿವಾರವು 'ಸ್ವದೇಶಿ' ಸ್ವಾವಲಂಬನೆಯನ್ನು ಆರಂಭದಿಂದಲೇ ಪ್ರತಿಪಾದಿಸುತ್ತದೆ. ಸಂಘಪರಿವಾರದ ನಾಯಕರು ಜಾಗತೀಕರಣವು ಬಡವರು ಮತ್ತು ಸ್ಥಳೀಯರ ಮೇಲೆ ಬೀರುವ ದುಷ್ಪರಿಣಾಮವನ್ನು ಅರ್ಥಿಕವಾಗಿ ಹಿಂದುಳಿದ ವರ್ಗಗಳಲ್ಲಿ ತಲೆದೋರುವ ಸಮಸ್ಯಗಳ ಮೇಲೆ ಜಾಗ್ರುತಿ ಮುಡಿಸಲು ಶ್ರಮಿಸುತ್ತಿದೆ. ವಿಶ್ವ ಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿಯಂತಹ ಅಂತರಾಷ್ಟ್ರೀಯ ಏಜೆನ್ಸಿಗಳ ಪಾತ್ರದ ಬಗ್ಗೆ ತನ್ನ ಸಂಶಯ ವ್ಯಕ್ತಪಡಿಸಿತ್ತಿದೆ. ಸಂಘದ ಘಟಕಗಳು ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಮೂಲಕ ಗ್ರಾಮಗಳಲ್ಲಿ ವಿಕೇಂದ್ರೀಕೃತ ಆರ್ಥಿಕ ಬೆಳವಣಿಗೆಯನ್ನು ಪ್ರತಿಪಾದಿಸಿತ್ತಿದೆ ಮತ್ತು ಉತ್ತೇಜಿಸುತ್ತಿದೆ. === ಪರಿಸರ ವಿಜ್ಞಾನ === ಸಂಘ ಪರಿವಾರದ ಘಟಕಗಳು "ಪರಿಸರ, ನೈಸರ್ಗಿಕ-ಪರಿಸರಶಾಸ್ತ್ರ ಮತ್ತು ಕೃಷಿ-ಆರ್ಥಿಕತೆಯನ್ನು ರಕ್ಷಿಸಲು" ಮತ್ತು "ಸ್ವಾವಲಂಬಿ ಗ್ರಾಮ-ಆಧಾರಿತ ಆರ್ಥಿಕತೆ" ಸ್ಥಾಪನಾ ಕ್ರಮಗಳಿಗೆ ಬೇಡಿಕೆಗಳನ್ನು ಇಟ್ಟಿದ್ದಾರೆ. ಅವರು ರಾಸಾಯನಿಕ ಗೊಬ್ಬರಗಳ ಬಳಕೆಯ ವಿರುದ್ಧ ಧ್ವನಿಯೆತ್ತಿದ್ದಾರೆ. ಭಾರತದಲ್ಲಿ ಸಾವಯವ ಕೃಷಿಯ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ಈ ಹಲವು ದೃಷ್ಟಿಕೋನಗಳು ಹಸಿರು ಪಕ್ಷದ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಸಂಘಪರಿವಾರದ ಒಂದು ಘಟಕವಾದ ಭಾರತೀಯ ಜನತಾ ಪಕ್ಷವು ೨೦೦೯ ರ ರಾಷ್ಟ್ರೀಯ ಚುನಾವಣೆಗಳಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾಗತಿಕ ತಾಪಮಾನದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ ಪ್ರಣಾಳಿಕೆಯು " ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ಎದುರಿಸುವುದು ", "ಹಿಮಾಲಯದ ಹಿಮನದಿಗಳ ಕರಗುವಿಕೆಯನ್ನು ತಡೆಯುವ ಕಾರ್ಯಕ್ರಮಗಳು", "ಅರಣ್ಯೀಕರಣ" ಮತ್ತು "ಭಾರತದ ಜೀವವೈವಿಧ್ಯತೆಯನ್ನು ರಕ್ಷಿಸುವುದರ ಬಗ್ಗೆ" ಒತ್ತು ನೀಡುವುದಾಗಿ ಭರವಸೆ ನೀಡಿದೆ. === ಅಂಗೀಕಾರ === ಸಂಘ ಪರಿವಾರವನ್ನು "ದೇಶಭಕ್ತ ಹಿಂದೂಗಳು" ಮತ್ತು " ಹಿಂದೂ ರಾಷ್ಟ್ರೀಯತಾವಾದಿಗಳು " ಎಂದೆಲ್ಲಾ ಕರೆಯುತ್ತಾರೆ. ವಿರೋಧಿಗಳು ಇವರನ್ನು "ಹಿಂದೂ ಕೋಮುವಾದಿ" ಎಂಬ ಹಣೆಪಟ್ಟಿಯನ್ನೂ ಕಟ್ಟಿದ್ದಾರೆ . ಅದರೆ ಪರಿವಾರ ಸಂಸ್ಥೆಗಳು ತಮ್ಮನ್ನು ತಾವು ಹಿಂದೂ ಧರ್ಮದ ಸಾಂಪ್ರದಾಯಿಕ ನೀತಿಗಳಲ್ಲಿ ಅಂತರ್ಗತವಾಗಿರುವಂತೆ ತೋರಿಸಿಕೊಳ್ಳುತ್ತಿವೆ. ಇವರ ಸೈದ್ಧಾಂತಿಕ ವಿರೋಧಿಗಳು ಅವರನ್ನು ಭಾರತದಲ್ಲಿ ನಿರಂಕುಶ, ಅನ್ಯದ್ವೇಷಿ ಮತ್ತು ಬಹುಸಂಖ್ಯಾತ ಧಾರ್ಮಿಕ ರಾಷ್ಟ್ರೀಯತೆಯ ಪ್ರತಿನಿಧಿಗಳೆಂದು ಆರೂಪಿಸಿದ್ದಾರೆ. ಈ ಸಂಘಟನೆಗಳು ಹಿಂದು ಭಯೋತ್ಪಾದನೆಯಲ್ಲಿ ಭಾಗಿಯಾಗಿವೆ ಎಂದು ಆರೋಪಿಸುತ್ತವೆ . ಫ್ಲೆಮಿಶ್, ಭಾರತಶಾಸ್ತ್ರಜ್ಞ ಮತ್ತು ಹಿಂದುತ್ವ ಬೆಂಬಲಿಗ ಕೊಯೆನ್‌ರಾಡ್ ಎಲ್ಸ್ಟ್ ಅವರು ತಮ್ಮ ೨೦೦೧ ರ ಪುಸ್ತಕ ದಿ ಕೇಸರಿ ಸ್ವಸ್ತಿಕದಲ್ಲಿ ವಿಮರ್ಶಕರಿಗೆ ಹೀಗೆಂದು ಸವಾಲೆಸೆದಿದ್ದಾರೆ, "ಎಲ್ಲಿಯವರೆಗೆ ವಿವಾದಾತ್ಮಕ ಪ್ರಶ್ನೆಗಳು ಒಂದು ಕಡೆಯಿಂದ ತೀವ್ರವಾಗಿ ಬರುತ್ತಿದ್ದರೆ, ಮತ್ತೂಂದು ಕಡೆಯಿಂದ ಇದಕ್ಕೆ ಮೌನ ಅಥವ ತುಂಡು ಪ್ರತ್ಯುತ್ತರಗಳು ಬರುತ್ತವೆ" . == ಸಾಮಾಜಿಕ ಪರಿಣಾಮ == ಸಂಘ ಪರಿವಾರದ ಚಟುವಟಿಕೆಗಳು ಸಾಕಷ್ಟು ಸಾಮಾಜಿಕ ಮತ್ತು ಧಾರ್ಮಿಕ ಪ್ರಭಾವ ಬೀರಿವೆ. ದೇಶದ ಶೈಕ್ಷಣಿಕ, ಸಾಮಾಜಿಕ ಮತ್ತು ರಕ್ಷಣಾ ನೀತಿಗಳ ಮೇಲೆ ಗಣನೀಯ ಪ್ರಭಾವ ಬೀರಿದೆ. === ಸಾಮಾಜಿಕ ಸುಧಾರಣೆ === ೧೯೭೯ ರಲ್ಲಿ, ಸಂಘ ಪರಿವಾರದ ಧಾರ್ಮಿಕ ವಿಭಾಗ, ವಿಶ್ವ ಹಿಂದೂ ಪರಿಷತ್ತು ಹಿಂದೂ ಸಂತರು ಮತ್ತು ಧಾರ್ಮಿಕ ಮುಖಂಡರನ್ನು ಹೊಂದಿದ್ದು, ಹಿಂದೂ ಧರ್ಮಗ್ರಂಥಗಳು ಮತ್ತು ಪಠ್ಯಗಳಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಕ್ಕೆ ಯಾವುದೇ ಧಾರ್ಮಿಕ ಅನುಮತಿ ಇಲ್ಲ ಎಂದು ಪುನರುಚ್ಚರಿಸಿತು. ವಿಶ್ವ ಹಿಂದೂ ಪರಿಷತ್ತು ಭಾರತದಾದ್ಯಂತದ ದೇವಾಲಯಗಳಲ್ಲಿ ದಲಿತರನ್ನು ಅರ್ಚಕರನ್ನಾಗಿ ಮಾಡುವ ಪ್ರಯತ್ನಗಳನ್ನು ಮುನ್ನಡೆಸುತ್ತಿದೆ, ಈ ಮೊದಲು ಸಾಮಾನ್ಯವಾಗಿ "ಮೇಲ್ಜಾತಿಗಳ" ಜನರು ಗಳು ಮಾತ್ರ ಇದಕ್ಕೆ ಅರ್ಹರಾಗಿದ್ದರು. ೧೯೮೩ ರಲ್ಲಿ, ಆರ್‌ಎಸ್‌ಎಸ್ ಸಮಾಜಿಕ ಸಮ್ರಸ್ತಾ ಮಂಚ್ ಎಂಬ ದಲಿತ ಸಂಘಟನೆಯನ್ನು ಸ್ಥಾಪಿಸಿತು. ಸಂಘಪರಿವಾರದ ಮುಖಂಡರು ಹೆಣ್ಣು ಭ್ರೂಣಹತ್ಯೆಯ ವಿರುದ್ಧದ ಅಭಿಯಾನ ಮತ್ತು ಶಿಕ್ಷಣಕ್ಕಾಗಿ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿ.ಎಚ್.ಪಿ ಹಲವಾರು ಶಿಕ್ಷಣ ಸಂಸ್ಥೆಗಳಾದ ಭಾರತ್ ಸೇವಾಶ್ರಮ, ಹಿಂದೂ ಮಿಲನ್ ಮಂದಿರ, ಏಕಲ್ ವಿದಾಲಯಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸಿತು. === ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣ === ತನ್ನ ಸೇವಾ ಕಾರ್ಯಕ್ರಮಗಳಿಂದಾಗಿ ವರ್ಷ ದಿಂದ ವರ್ಷಕ್ಕೆ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು ಸಬಲೀಕರಣ ಮಾಡಲು ಕಾರಣವಾಗಿವೆ ಇವರುಗಳಲ್ಲಿ ಹೆಚ್ಛಿನವರು ಬುಡಕಟ್ಟು ಜನಾಂಗದವರು. ಈ ಜನಾಂಗ ದೀರ್ಘಕಾಲ ರಾಜಕೀಯವಾಗಿ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿದ್ದ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಾಬುಲಾಲ್ ಮರಾಂಡಿ ಅವರು ಜಾರ್ಖಂಡ್ ರಾಜ್ಯದ ಮೊದಲ ಮುಖ್ಯಮಂತ್ರಿಯಾದರು . ಬುಡಕಟ್ಟು ಸಮುದಾಯಕ್ಕೆ ಸೇರಿದ ಸಂಘ ಪರಿವಾರದ ಇತರ ನಾಯಕರಲ್ಲಿ ಕರಿಯಾ ಮುಂಡಾ, ಜುಯಲ್ ಓರಂ ಸೇರಿದ್ದಾರೆ ; ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಇವರಿಬ್ಬರುಸಚಿವರಾಗಿದ್ದರು. ಭಾರತೀಯ ರಾಜಕೀಯದಲ್ಲಿ ಸಂಘಪರಿವಾರವು ತನ್ನ ಪ್ರಯತ್ನದಿಂದ ಅನೇಕ ದಲಿತರು ಮತ್ತು ಹಿಂದುಳಿದ ವರ್ಗಗಳ ಪ್ರತಿನಿಧಿಗಳು, ಸಾಮಾಜಿಕ ನಿರ್ಲಕ್ಷ್ಯಕ್ಕೆ ಬಲಿಯಾದವರನ್ನು ಸರ್ಕಾರ ಮತ್ತು ಆಡಳಿತದಲ್ಲಿ ಪ್ರಮುಖ ಸ್ಥಾನಗಳಿಗೆ ತಂದಿತು. ಅರ್ ಎಸ್ ಎಸ್ ನ ಸದಸ್ಯರಾಗಿದ್ದ ದಲಿತರಾದ ಸೂರಜ್ ಭಾನ್ ಅವರು ೧೯೯೮ ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ರಾಜ್ಯಪಾಲರಾದರು ಹಿಂದುಳಿದ ವರ್ಗಗಳ ಸಂಘ ಪರಿವಾರದ ಇತರ ನಾಯಕರು, ಪ್ರವರ್ಧಮಾನಕ್ಕೆ ಬಂದವರಲ್ಲಿ ಕಲ್ಯಾಣ್ ಸಿಂಗ್, ಯುಪಿ ಮಾಜಿ ಮುಖ್ಯಮಂತ್ರಿ ಉಮಾಭಾರತಿ, ಭಾರತದ ಹಾಲಿ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿಗೋಪಿನಾಥ್ ಮುಂಡೆ , ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರಮುಖರು. ಭಾರತದಾದ್ಯಂತ ಅನೇಕ ಹಳ್ಳಿಗಳಲ್ಲಿ, ಧರ್ಮ ರಕ್ಷಾ ಸಮಿತಿಗಳು (ಕರ್ತವ್ಯ/ಧರ್ಮ ಸಂರಕ್ಷಣಾ ಸಮಿತಿಗಳು) ಧಾರ್ಮಿಕ ಪ್ರವಚನವನ್ನು ಉತ್ತೇಜಿಸುತ್ತವೆ ಮತ್ತು ಭಜನೆ ಪ್ರದರ್ಶನಕ್ಕಾಗಿ ಒಂದು ರಂಗವನ್ನು ರೂಪಿಸುತ್ತವೆ. ಸಂಘವು ಹಿಂದೂ ದೇವತೆಗಳ ಪ೦ಚಾ೦ಗವನ್ನು ಪ್ರಾಯೋಜಿಸುತ್ತದೆ ಮತ್ತು ಗಣೇಶ ಚತುರ್ಥಿ, ನವರಾತ್ರಿಯನ್ನು ನಡೆಸುವ ಅನುಮೋದಿತ ವಿಧಾನಗಳ ಕುರಿತು ಸೂಚನೆಯನ್ನು ನೀಡುತ್ತದೆ. === ರಾಜಕೀಯ === ರಾಷ್ಟ್ರೀಯ ರಾಜಕೀಯದಲ್ಲಿ ಸಂಘಪರಿವಾರವನ್ನು ಪ್ರತಿನಿಧಿಸುವ ಭಾರತೀಯ ಜನತಾ ಪಕ್ಷವು ಭಾರತದಲ್ಲಿ ಮೂರು ಸರ್ಕಾರಗಳನ್ನು ರಚಿಸಿದೆ, ಇತ್ತೀಚೆಗೆ ಮೇ೨೦೧೪ ರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಧಿಕಾರದಲ್ಲಿದೆ, ಮೇ ೨೦೧೯ ರಲ್ಲಿ ಮರು ಆಯ್ಕೆಯಾಯಿತು. ಬಿಜೆಪಿಯ ರಾಜಕೀಯ ವಿರೋಧಿಗಳು ಸಂಘಪರಿವಾರವು ಮೃದು ಹಿಂದುತ್ವವಾದವನ್ನು ತನ್ನ ಬಚ್ಛಿಟ್ಟ ಉದ್ದೇಶಗಳಿಗೊಸ್ಕರ ಪ್ರತಿಪಾದಿಸುತ್ತದೆ ಎಂದು ಅರೋಪಿಸುತ್ತಾರೆ. ಇತಿಹಾಸ ಪಠ್ಯಪುಸ್ತಕಗಳು ಮತ್ತು ಪಠ್ಯಕ್ರಮಗಳ ವಿಷಯ ಮತ್ತು ಶಿಕ್ಷಣ ವ್ಯವಸ್ಥೆಯ ಇತರ ಅಂಶಗಳನ್ನು ಬದಲಾಯಿಸುವ ಬಿಜೆಪಿಯ ಪ್ರಯತ್ನಗಳಿಂದ ಇದನ್ನು ಗುರುತಿಸಬಹುದೆಂಬುದು ಅವರ ಅರೋಪ. ೧೯೮೪ ರಲ್ಲಿ ಬಿಜೆಪಿ ಸಂಸತ್ತಿನಲ್ಲಿ ಕೇವಲ ೨ ಸ್ಥಾನಗಳನ್ನು ಹೊಂದಿತ್ತು ಮತ್ತು ೧೯೯೨ ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಪಕ್ಷವು ರಾಷ್ಟ್ರೀಯ ಮನ್ನಣೆ ಗಳಿಸಿ ೧೯೯೮ ರಲ್ಲಿ ಅಧಿಕಾರಕ್ಕೆ ಏರಿತು ಎಂಬ ಅರೋಪವನ್ನು ಮಾಡುತ್ತಾರೆ . === ಬಾಬರಿ ಮಸೀದಿ ಧ್ವಂಸ === ಯುಪಿಎ ಸ್ಥಾಪಿಸಿದ ಲಿಬರ್ಹಾನ್ ಆಯೋಗದ ವರದಿಯ ಪ್ರಕಾರ ಸಂಘಪರಿವಾರವು ಬಾಬರಿ ಮಸೀದಿ ಧ್ವಂಸವನ್ನು ಸಂಘಟಿಸಿತು ಎಂದು ಆಯೋಗವು ಹೇಳಿದೆ. "ಅಯೋಧ್ಯೆಯಲ್ಲಿ ಸಂಪೂರ್ಣ ಮಂದಿರ ನಿರ್ಮಾಣದ ಆಂದೋಲನದ ಹೊಣೆಗಾರಿಕೆ ಅಥವಾ ಶ್ರೇಯಸ್ಸು ಸಂಘ ಪರಿವಾರಕ್ಕೆ ಸಲ್ಲಬೇಕು". ಸಂಘ ಪರಿವಾರವು "ವಿಸ್ತೃತ ಮತ್ತು ವ್ಯಾಪಕವಾದ ಅಂಗ", ಇದು ಹಲವಾರು ಸಂಸ್ಥೆಗಳನ್ನು ಒಳಗೋಂಡಿದೆ, ಇದು ಪ್ರತಿಯೊಂದು ರೀತಿಯ ಸಾಮಾಜಿಕ, ವೃತ್ತಿಪರ ಮತ್ತು ಇತರ ಜನಸಂಖ್ಯಾ ಗುಂಪುಗಳ ವ್ಯಕ್ತಿಗಳನ್ನು ಉದ್ದೇಶಿಸಿ ಮತ್ತು ಒಟ್ಟುಗೂಡಿಸುತ್ತದೆ. == ಸಂಘ ಪರಿವಾರದ ಸಂಘಟನೆಗಳ ಪಟ್ಟಿ == ಸಂಘ ಪರಿವಾರವು ಈ ಕೆಳಗಿನ ಸಂಸ್ಥೆಗಳನ್ನು ಒಳಗೊಂಡಿದೆ (ಆವರಣದಲ್ಲಿ ಸದಸ್ಯತ್ವದ ಅಂಕಿಅಂಶಗಳೊಂದಿಗೆ). ಅವುಗಳನ್ನು ಸಹ ವರ್ಗೀಕರಿಸಲಾಗಿದೆ. == ಗ್ರಂಥಸೂಚಿ == == ಉಲ್ಲೇಖಗಳು ==